Skip to content
Monday, 10 August 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಸರ್ಕಾರಿ ಶಾಲಾ ಮಕ್ಕಳಿಗೆ ತಮ್ಮೇಶ್ ಗೌಡ ಜನ್ಮದಿನದ ಪ್ರಯುಕ್ತ. ನೋಟ್‌ಬುಕ್ ಹಾಗೂ ಸಿಹಿತಿಂಡಿ ವಿತರಣೆ

Share

ಯಲಹಂಕ / ಅಗ್ರಹಾರ ಬಡಾವಣೆ: ದಿನಾಂಕ 10.08.2026ರಂದು ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಪ್ರಮುಖರಾದ ಶ್ರೀಯುತ ತಮ್ಮೇಶ್ ಗೌಡ ಅವರು ತಮ್ಮ ಜನ್ಮದಿನದ ಪ್ರಯುಕ್ತ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಣೆ ಮಾಡಿದರು

​ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ನೆರವಾಗುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಉದಾತ್ತ ಕಾರ್ಯಕ್ರಮದಲ್ಲಿ ಶ್ರೀ ಎನ್ ನರಸಿಂಹಮೂರ್ತಿ. ಅಗ್ರಹಾರ ಬಿಜೆಪಿ ಮುಖಂಡರು ಹಾಗೂ ಸಮಾಜಸೇವಕರು ಶ್ರೀ ಮುನಿಸ್ವಾಮಿ ಒಡೆಯರ್ ಅಧ್ಯಕ್ಷರು, ಭಾ,ಜ.ಪ, ಓ.ಬಿ.ಸಿ. ಮೋರ್ಚಾ, ಬ್ಯಾಟರಾಯನಪುರ ನಗರ

ಮಂಡಲ ಇನ್ನೂ ಅನೇಕ ಬಿಜೆಪಿ ಮುಖಂಡರು. ಅಗ್ರಹಾರ ಬಡಾವಣೆ ಹಾಗೂ ಗ್ರಾಮದ ಹಿರಿಯ ಮುಖ್ಯಸ್ಥರು, ಪ್ರಮುಖ ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು.

​ಅಲ್ಲದೆ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಎರಡೂ ಶಾಲೆಗಳ ಶಿಕ್ಷಕ ವೃಂದದವರು, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳಿಗೆ ಉಪಯುಕ್ತ ಕೊಡುಗೆ ನೀಡಿದ ತಮ್ಮೇಶ್ ಗೌಡ ಅವರ ಸಾಮಾಜಿಕ ಕಾಳಜಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದರು.

Written by

Editor Desk - Bayalu Simha News

Leave a Reply

Your email address will not be published. Required fields are marked *