Skip to content
Monday, 10 August 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ರಾಷ್ಟ್ರದ ಅಭಿವೃದ್ಧಿಯಾಗಲು ಯುವಕರ ಪಾತ್ರ ಪ್ರಮುಖವಾಗಿದೆ : ಸರ್ವೋತ್ತಮ ಜಾರಕಿಹೊಳಿ

Share

ಮೂಡಲಗಿ : ನಮ್ಮ ರಾಷ್ಟ್ರದ ಅಭಿವೃದ್ಧಿಯಾಗಲು ಹಾಗೂ ನಶಮುಕ್ತ ಭಾರತ ಮಾಡಲು ಪ್ರತಿಯೊಬ್ಬ ಯುವಕರು ರಾಷ್ಟ್ರದ ಪ್ರಗತಿಗೆ ನಿಸ್ವಾರ್ಥದಿಂದ ಕಾರ್ಯ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಅವರು ಮೂಡಲಗಿ ಪಟ್ಟಣದ ಶ್ರೀ ಶ್ರೀಪಾದಭೋದ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾರತ ಸರ್ಕಾರದ ಮೈ ಭಾರತ್ ಕೇಂದ್ರ ಬೆಳಗಾವಿ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಹಾಗೂ ಶ್ರೀಪಾದಭೋದ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೂಡಲಗಿ ಏನ್ ಎಸ್ ಎಸ್ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ನಶಾ ಮುಕ್ತ ವಿಕಸಿತ ಭಾರತ ಕಾರ್ಯಕ್ರಮದ ವಿವಿಧ ಸ್ಪರ್ಧೆಯ ಸಮಾರಂಭ ಉದ್ಘಾಟಿಸಿ ಮಾತನಾಡಿ ಗುಟ್ಕಾ ಚಟಕಾ ಮಟಕಾದಂತ ಚಟಗಳಿಂದ ದೂರ ಇರಬೇಕು ಎಂದು ಯುವಕರಿಗೆ ಕರೆ ನೀಡಿದರು.

ಬೆಳಗಾವಿ ಮೈ ಭಾರತ ಕೇಂದ್ರದ ಬೆಳಗಾವಿ ಜಿಲ್ಲಾ ಯುವ ಅಧಿಕಾರಿ ಸಂಗ್ರಾಮ ಸಾವಂತ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮೈ ಭಾರತ ಕೇಂದ್ರದ ಮೂಲಕ ದೇಶದ ಯುವಜನರಿಗೆ ಹಲವಾರು ಯೋಜನೆಗಳು, ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದರ ಸದುಪಯೋಗವನ್ನು ನಮ್ಮ ಭಾಗದ ಯುವ ಜನತೆ ಯುವಕ ಸಂಘಗಳ ಮೂಲಕ ನಿರಂತರ ಕಾರ್ಯ ಮಾಡಬೇಕು ಎಂದು ಹೇಳಿದರು.

ಮೂಡಲಗಿಯ ಹಿರಿಯ ಸಾಹಿತಿಗಳಾದ ಬಾಲಶೇಖರ ಬಂದಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ ದುಶ್ಚಟಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಯುವಕರು ಆರೋಗ್ಯವಂತ ಜೀವನ ನಡೆಸಲು ಇಂತಹ ಕಾರ್ಯಕ್ರಮಗಲ್ಲಿ ಭಾಗವಹಿಸಬೇಕು. ನಮ್ಮ ಭಾಗದಲ್ಲಿ ನಿರಂತರವಾಗಿ ನಿಸ್ವಾರ್ಥ ಸೇವೆ ಹಾಗೂ ಕ್ರೀಡೆ ಜನಪದ ಕಲೆ ಮುಂತಾದ ಜನ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಯುವ ಸಂಘಟಕ ಸಿದ್ದಣ್ಣ ದುರದುಂಡಿಯವರ ಕಾರ್ಯಶ್ಲಾಘನೀವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ನಮ್ಮ ಗ್ರಾಮೀಣ ಭಾಗದ ಯುವಕರು ಶ್ರದ್ದೆ ಭಕ್ತಿ ತಾಳ್ಮೆ ನಿಸ್ವಾರ್ಥದಿಂದ ಕಾರ್ಯ ಮಾಡಿದರೆ ನಮ್ಮ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಹೇಳಿದರು.

ಶ್ರೀ ಶ್ರೀಪಾದಭೋದ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಮಹೇಶ ಕಂಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕಾಲೇಜಿನಲ್ಲಿ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಮಾಡಿದ ಬೆಳಗಾವಿ ಮೈ ಭಾರತ್ ಕೇಂದ್ರಕ್ಕೆ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಚೇತನರಾಜ ಬಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಆರ್ ಐ ಆಸಂಗಿ, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಷ್ ಗೊಡ್ಯಾಗೋಳ, ಗೋಪಾಲ ಗಡ್ಡೆಕಾರ, ಅಬ್ದುಲ್ ಮಿರ್ಜಾನಾಯಕ, ಮಲ್ಲಯ್ಯ ಕರಡಿ, ಆದರ್ಶ್ ಪೂಜೇರಿ, ಸರಸ್ವತಿ ರಬಕವಿ, ಸುಜಾತಾ ಪುಡ್ಲಕಟ್ಟಿ, ಮಲ್ಲಿಕಾರ್ಜುನ ಸಜ್ಜನವರ, ಸುರೇಶಬಾಬು ಮೋಹನಕುಮಾರ್, ಮಧುಸೂದನ, ಶಿವಾನಂದ ಹಿರೇಮಠ ಮತ್ತು ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಜನಪದ ಗೀತೆ, ಕಿರು ನಾಟಕ, ಭಾಷಣ ಸ್ಪರ್ಧೆ, ಕವಿತೆ ಸ್ಪರ್ಧೆ, ಘೋಷ್ಯವಾಕ್ಯ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ತೃತೀಯ ಮೆಡಲ್ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಶಿವಕುಮಾರ್ ಸರ್ ನಿರೂಪಿಸಿ ವಂದಿಸಿದರು.

Written by

Editor Desk - Bayalu Simha News

Leave a Reply

Your email address will not be published. Required fields are marked *