Skip to content
Monday, 10 August 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: 550ಕ್ಕೂ ಹೆಚ್ಚು ಮಕ್ಕಳಿಗೆ ಕಾಂಗ್ರೆಸ್ ಮುಖಂಡ ಆಂಜಿನಪ್ಪ ರವರಿಂದ ಗೌರವ ಸನ್ಮಾನ

Share

ಚಿಕ್ಕಬಳ್ಳಾಪುರ: ​ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಶ್ರೀ ಗುಟ್ಟಾಂಜನೇಯ ಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ(ಪುಟ್ಟು )ಅವರ ನೇತೃತ್ವದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.

ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸುಮಾರು 550ಕ್ಕೂ ಹೆಚ್ಚು ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ ಅಭಿನಂದಿಸಲಾಯಿತು.ಈ ವೇಳೆ ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ (ಪುಟ್ಟು)ಮಾತನಾದಿ, 2015ರಿಂದಲೂ ದಿವಂಗತ ಸಂತೋಷ್ ಬೆಳ್ಳೂಟಿ ಅವರೊಂದಿಗೆ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಅವರ ನೆನಪಿನಲ್ಲಿ ಸಮಾಜಮುಖಿ ಹಾಗೂ ಪ್ರಕೃತಿ ಪರ ಕೆಲಸಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಮತ್ತು ಅವರ ಭವಿಷ್ಯದ ಉನ್ನತ ಶಿಕ್ಷಣ ಹಾಗೂ ಕನಸುಗಳಿಗೆ ಶಕ್ತಿ ತುಂಬುವುದೇ ಈ ಪ್ರತಿಭಾ ಪುರಸ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಯುವ ಜನತೆಯಿಂದ ಮಾತ್ರ ದೇಶದ ಭವಿಷ್ಯ ಹಾಗೂ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ,ಹೆತ್ತ ತಂದೆ-ತಾಯಿ ಹಾಗೂ ಹುಟ್ಟಿದ ಊರಿಗೆ ಕೀರ್ತಿ ತರಬೇಕು” ಎಂದು ಶುಭ ಹಾರೈಸಿದರು.

  • ​ಅತ್ಯುತ್ತಮ ಸಾಧನೆ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು (EV) ವಿತರಿಸಲಾಯಿತು.
  • ರ‍್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಟಿವಿಗಳನ್ನು ಬಹುಮಾನವಾಗಿ ನೀಡಲಾಯಿತು.
  • ಪ್ರಶಸ್ತಿ ಪುರಸ್ಕೃತ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಾಲಾ ಬ್ಯಾಗ್ ಹಾಗೂ ಬೋಟ್ (BOAT) ಕಂಪನಿಯ ಸ್ಮಾರ್ಟ್‌ವಾಚ್ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ವಾಚ್ ನೀಡುವ ಉದ್ದೇಶವನ್ನು ತಿಳಿಸಿದ ಆಂಜಿನಪ್ಪ(ಪುಟ್ಟು)ರವರು, ವಿದ್ಯಾರ್ಥಿಗಳ ಜೀವನದಲ್ಲಿ ಸಮಯ ಬಹಳ ಮುಖ್ಯ. ಸಮಯದ ಬಗ್ಗೆ ಜವಾಬ್ದಾರಿ, ಎಚ್ಚರಿಕೆ ಮತ್ತು ನಿಖರತೆ ಇರಲಿ ಎಂಬ ಉದ್ದೇಶದಿಂದ ಯುವಕರಿಗೆ ಅತ್ಯಂತ ಪ್ರಿಯವಾದ ವಾಚ್‌ಗಳನ್ನು ಬಹುಮಾನವಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

​ಈ ಸಂದರ್ಭದಲ್ಲಿ ಮುತ್ತುಕದಹಳ್ಳಿ ಎಂ. ಶ್ರೀನಿವಾಸ್,ಮುತ್ತೂರು ಚಂದ್ರೇಗೌಡರು,ಕಳ್ಳನಾಯಕನಹಳ್ಳಿ ಭೀಮೇಶ,ರಮೇಶ,ರಾಜಕುಮಾರ್ ಗೌಡನಹಳ್ಳಿ ಮಂಜುನಾಥ್,ಶೇಖರ್ ರೆಡ್ಡಿ, ಅಫ್ಸರ್ ಪಾಷಾ,ಜಮೀರ್, ಪೂಲಕುಂಟಹಳ್ಳಿ ಅಶ್ವತ್ ರೆಡ್ಡಿ, ತಲಕಾಯಲಬೆಟ್ಟ ಅಶ್ವತ್ ರೆಡ್ಡಿ, ನಾರಾಯಣ್ ರೆಡ್ಡಿ,ಬೆಳ್ಳೂಟಿ ವರಲಕ್ಷ್ಮಿ,ಆನೂರು ಮುರಳಿ,ದೇವರಾಜ್,ಆನಂದ್,ಸುಗಟೂರು ನಾಗೇಶ್, ಮಳಮಾಚನಹಳ್ಳಿ ಮುನಿರಾಜು, ಸಂತೋಷ,ಸೊರಕಾಯಲಹಳ್ಳಿ ನಾಗಚಂದ್ರ,ದೊಡ್ಡದಾಸರಹಳ್ಳಿ ದೇವರಾಜ್,ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು,ಕಾಂಗ್ರೆಸ್ ನಾಯಕರು,ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಮುಬಷೀರ್ ಅಹಮದ್ 

Written by

Editor Desk - Bayalu Simha News

Leave a Reply

Your email address will not be published. Required fields are marked *