Skip to content
Monday, 10 August 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಮಾದಾವರ ಸರ್ಕಾರಿ ಶಾಲೆಯಲ್ಲಿ ಕಿರು ವಿಜ್ಞಾನ ಮೇಳ

Share

ಬೆಂಗಳೂರು : ಆಗಸ್ಟ್ 6: .ಎಂ.ಟಿ.ಎಂ.(ಬಿ...ಸಿ) ವತಿಯಿಂದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠಶಾಲೆ, ಮಾದಾವರದಲ್ಲಿ ಕಿರು ವಿಜ್ಞಾನ ಮೇಳವನ್ನು ಆಯೋಜಿಸಲಾಗಿತ್ತು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಕವಿತಾ ಮೇಡಂ, ಶಿಕ್ಷಕರಾದ ಶ್ರೀಮತಿ ಶೈಲಜಾ, ಶ್ರೀಮತಿ ಶ್ರೀದೇವಿ, ಶ್ರೀಯುತ ಹರಿಪ್ರಸಾದ್ ಹಾಗೂ ಅಗಸ್ತ್ಯ ಶಿಕ್ಷಕರಾದ ಕುಮಾರಿ ಹರ್ಷಿತಾ ಎನ್., ಕುಮಾರಿ ಚೈತ್ರಾ ಬಿ.ಟಿ. ಮತ್ತು ಶ್ರೀಯುತ ಮೋಹನ್ ಕೆ.. ಅವರ ಉಪಸ್ಥಿತಿಯಲ್ಲಿ ಎಸ್‌ಡಿಎಂಸಿ ಸದಸ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೇಳದಲ್ಲಿ ವಿದ್ಯಾರ್ಥಿಗಳಿಂದ 34 ವಿಜ್ಞಾನ ಮಾದರಿಗಳು ಹಾಗೂ 6 ಕಡಿಮೆ ವೆಚ್ಚದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು. ವಿಜ್ಞಾನ ಮಾದರಿಗಳ ಮೂಲಕ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಮತ್ತು ಕಲಿಕೆಯನ್ನು ಪ್ರದರ್ಶಿಸಿದರು. ಶಾಲೆಯ ವಿದ್ಯಾರ್ಥಿಗಳ ಜೊತೆಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಮೇಳದಲ್ಲಿ ಭಾಗವಹಿಸಿ ಮಾದರಿಗಳನ್ನು ವೀಕ್ಷಿಸಿ, ವಿಜ್ಞಾನ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಒಟ್ಟು 334 ಮಂದಿ ಭಾಗವಹಿಸಿದ್ದು, 14 ವೈ..ಎಲ್. ಹುಡುಗರು, 127 ಹುಡುಗಿಯರು, 153 ವಿದ್ಯಾರ್ಥಿಗಳು, 8 ಪುರುಷರು ಹಾಗೂ 3 ಮಹಿಳೆಯರು ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಎಸ್‌ಕೆ-1 ರೀಜನಲ್ ಎಕ್ಸ್‌ಪೀರಿಯನ್ಸ್ ಲೀಡರ್ ಶ್ರೀ ನವೀನ್ ಸರ್ ಅವರ ಮಾರ್ಗದರ್ಶನದಲ್ಲಿ ಕಿರು ವಿಜ್ಞಾನ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

Written by

Editor Desk - Bayalu Simha News

Leave a Reply

Your email address will not be published. Required fields are marked *