ಯಲಹಂಕ : ದಿನಾಂಕ 07.08.2026 ರಂದು ಕೃಷ್ಣ ಬೈರೇಗೌಡ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ಅಧ್ಯಕ್ಷತೆಯ ಮೇರೆಗೆ ಸಂಜೆ 5 ಗಂಟೆಯಿಂದ ಕೋಗಿಲು ಗ್ರಾಮದಲ್ಲಿ ಪೂಜಮ್ಮ ದೇವಿ ಮತ್ತು ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ, ಸಂಕಲ್ಪ ಸೇವೆ, ಮತ್ತು ಭಕ್ತಾದಿಗಳಿಂದ ವಿಶೇಷ ಪೂಜೆ ಕುಂಕುಮಾರ್ಚನೆ ನೆರವೇರಿತು. ಈ ಕಾರ್ಯಕ್ರಮವನ್ನು ಕೋಗಿಲು ಗ್ರಾಮದ ಪೂಜಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಕೋಗಿಲು ಗ್ರಾಮ ಹಾಗೂ ಅಗ್ರಹಾರ ಕಟ್ಟಿಗೆನಹಳ್ಳಿ ಹಾಗೂ ಸುತ್ತು ಮುತ್ತಲಿನ ಭಕ್ತಾದಿಗಳು ಪೂಜಮ್ಮ ದೇವಿ ಮತ್ತು ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಲು, ಸುಮಂಗಲಿಯರು ಮತ್ತು ಭಕ್ತಾದಿಗಳು ಸೇರಿ ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಕುಂಕುಮಾರ್ಚನೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಮಳೆಯ ಅನುಗ್ರಹ: ಕಳೆದೆರಡು ದಿನಗಳಿಂದ ಮಳೆ ಇಲ್ಲದೆ ಇದ್ದರೂ, ಪೂಜೆಯ ಶುಭ ಸಂದರ್ಭದಲ್ಲಿ ಮಳೆಯಾಗಿ ಗ್ರಾಮ ಹಾಗೂ ಸ್ಥಳ ಶುದ್ಧಿಯಾಯಿತು ಎಂದು ಪೂಜಾರಿ ವಿಜಯ್ ಕುಮಾರ್ ಅವರು ಸಂಸಂತೋಷ ವ್ಯಕ್ತಪಡಿಸಿದರು.
ಊರಿನ ಪ್ರತಿಯೊಬ್ಬರಿಗೂ ಹಾಗೂ ಅವರ ಕುಟುಂಬಕ್ಕೆ ದೀರ್ಘ ಸುಮಂಗಲಿಯರ ಶ್ರೇಯಸ್ಸು ಮತ್ತು ಶುಭ ಉಂಟಾಗಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.ತದನಂತರ ಮಹಾಮಂಗಳಾರತಿ ನಡೆಯಿತು ಈ ಕಾರ್ಯಕ್ರಮಕ್ಕೆ. ಆಗಮಿಸಿದ ಸಮಸ್ತ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಭಕ್ತಾದಿಗಳು ಹಾಗೂ ಸುಮಂಗಲಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜಾ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು.ಅಪಾರ ಸಂಖ್ಯೆಯ ಭಕ್ತಾದಿಗಳು ಮತ್ತು ಮಹಿಳೆಯರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಈ ಕಾರ್ಯಕ್ರಮದಲ್ಲಿ . ಎಚ್ಎ ಶಿವಕುಮಾರ ಸಂಪಿಗೆಹಳ್ಳಿ .ಕೆ ಎನ್ ನಾಗೇಂದ್ರ ಕುಮಾರ್ ಮತ್ತು.ಗೋವಿ ರವರು ಕಾಂಗ್ರೆಸ್ ಮುಖಂಡರು ಕೋಗಿಲು ಹಾಗೂ . ಕೋಗಿಲು ಗ್ರಾಮದ ಸಮಸ್ತ ನಾಗರಿಕರು ಮತ್ತು ಅಗ್ರಹಾರ. ಅಗ್ರಹಾರ ಬಡಾವಣೆ ಚಾಮುಂಡಿ ಲೇಔಟ್ ಕಟ್ಟಿಗೆನಹಳ್ಳಿ ಪಾಲನಹಳ್ಳಿ ವಿನಯನಗರ ದ್ವಾರಕಾ ನಗರ ಇನ್ನು ಅನೇಕ ಸುತ್ತಮುತ್ತಲಿನ ಗ್ರಾಮದ ಮುಖಂಡರು ಹಾಗೂ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿದರು


